ಶಾಂತಾ ರಂಗಸ್ವಾಮಿ (ಜನನ: ಜನವರಿ ೧ ೧೯೫೪) ಭಾರತದ ಕ್ರಿಕೆಟ್ ಆಟಗಾರ್ತಿ. ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ ಭಾರತದ ಪರವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು. ಶಾಂತಾ ರಂಗಸ್ವಾಮಿ ಅವರು ೧೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ ಹಾಗೂ ೧೬ ಪಂದ್ಯಗಳ ನಾಯಕತ್ವವನ್ನು ವಹಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ. == ಜೀವನ == ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ ಮಗಳು. ಇವರಿಗೆ ೬ ಜನ ಸಹೋದರಿಯರು ಇದ್ದಾರೆ. ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಬಗ್ಗೆ ಲೇಖನಗಳನ್ನು ರಚಿದ್ದಾರೆ. == ಪ್ರಶಸ್ತಿಗಳು == ೧೯೨೬ರಲ್ಲಿ ಅರ್ಜುನ ಪ್ರಶಸ್ತಿ. == ಉಲ್ಲೇಖ == == ಬಾಹ್ಯ ಸಂಪರ್ಕ == ://..////54274.